ವರ್ಕಾಡಿಯಲ್ಲಿ ವೆಲಂಕಣಿ ಮಹೋತ್ಸವ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ 1910ರಲ್ಲಿ ಸ್ಥಾಪಿಸಲ್ಪಟ್ಟ, ಯೇಸು ಕ್ರಿಸ್ರರ ತಿರುಹøದಯಕ್ಕೆ ಸಮರ್ಪಿಸಲಾದ ವರ್ಕಾಡಿ ದೇವಾಲಯದಲ್ಲಿ ಆರೋಗ್ಯಮಾತೆ (ವೆಲಂಕಣಿ) ಪುಣ್ಯಕ್ಷೇತ್ರದ 27ನೇ ವರ್ಷದ ವಾರ್ಷಿಕ ಮಹೋತ್ಸವವು ಫೆಬ್ರವರಿ 11   ಆದಿತ್ಯವಾರದಂದು ವಿಜೃಂಭಣೆಯಿಂದ ಜರಗಿತು. 3000 ಕ್ಕೂ ಹೆಚ್ಚು ವೆಲಂಕಣಿ ಮಾತಾ ಭಕ್ತಾದಿಗಳು ಸಂಬ್ರಮದಲ್ಲಿ ಭಾಗಿಗಳಾಗಿ ಮಾತೆಯ ಕ್ರಪೆಗೆ ಪಾತ್ರರಾದರು

ದಿನದ ಕಾರ್ಯಕ್ರಮವು ಬೆಳಿಗ್ಗೆ 10 ಘಂಟೆಗೆ, ದಾನಿಗಳಿಗೆ ಮೊಂಬತ್ತಿ ವಿತರಣೆಯ ನಮನದೊಂದಿಗೆ ಆರಂಭವಾಯಿತು. ಕಾಸರಗೋಡು ಜಿಲ್ಲೆಯ ಮೂಲ ನಿವಾಸಿಗಳಲ್ಲಿ ಮೊದಲ ಕಥೊಲಿಕ ಧರ್ಮಗುರುಗಳಾದ ಹಿರಿಯರಾದ  ವಂದನೀಯ ಸ್ವಾಮಿ ಬೆಂಜಮಿನ್ ಡಿಸೋಜಾ ಇವರು ದಾನಿಗಳಿಗೆ ಮೊಂಬತ್ತಿ ವಿತರಿಸಿದರು. ಬಳಿಕ ಬೆಳಿಗ್ಗೆ 10.30 ಘಂಟೆಗೆ ನಡೆದ ಸಂಬ್ರಮದ ಬಲಿಪೂಜೆಯ ನೇತೃತ್ವವನ್ನು ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಶೇತ್ರದ ನಿರ್ದೇಶಕರಾದ ವಂದನೀಯ ಸ್ವಾಮಿ ಬೆಂಜಮಿನ್ ಪಿಂಟೊ ಇವರು ವಹಿಸಿದ್ದರುಮಂಗಳೂರು ಜೆಪ್ಪು ಸಂತ ಜೋಸೆಫ್ ಗುರುಕುಲದ ಆದ್ಯಾತ್ಮಿಕ ನಿರ್ದೇಶಕರಾದ ವಂದನೀಯ ಸ್ವಾಮಿ ಬೊನಿಫಾಸ್ ಪಿಂಟೊ ಇವರು ಅಂದಿನ ವಿಶೇಷ ಪ್ರವಚನ ಗೈದÀರು. ಜಪಸರ ಪ್ರಾರ್ಥನೆಯ ಮುಕಾಂತರ ಕೌಟುಂಬಿಕ ಆನ್ಯೋನ್ನತೆ ಹಾಗೂ ಏಕತೆಯ ಸಂದೇಶವನ್ನು ಅವರು ತುಂಬಿದ ಸಭೆಯಲ್ಲಿ ನೀಡಿದರು. ವಿವಿದ ಧರ್ಮಕೇಂದ್ರಗಳಿಂದ ಬಂದಿದ್ದ ಒಂಬತ್ತು ಧರ್ಮಗುರುಗಳು ಪ್ರತ್ಯೇಕ ಪ್ರಾರ್ಥನೆಯೊಂದಿಗೆ ರೋಗಿಗಳಿಗೆ ಆಶೀರ್ವಾದವನ್ನು ನೀಡಿದರು. ಸ್ಥಳೀಯ ಧರ್ಮಗುರುಗಳು ಭಕ್ತಾದಿಗಳು ವೆಲಂಕಣಿ ಮಾತೆಗೆ ಆರ್ಪಿಸಿದ ಸ್ತುತಿ, ಆಶೋತ್ತರಗಳು ಹಾಗೂ ಪ್ರಾರ್ಥನೆಗಳನ್ನು ಘೋಶಿಸಿದರು. ಪೂಜಾವಿಧಿಗಳ ಮುಕ್ತಾಯದ ನಂತರ ನೆರೆದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆ   ನಡೆಯಿತು.

 

ಪ್ರಯುಕ್ತ ಇದೇ ದಿನ ಸಂಜೆ ವರ್ಕಾಡಿ ಚರ್ಚ್ ವಠಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು. ಶಾಲಾ ವಿಧ್ಯಾರ್ಥಿಗಳು ಹಾಗು ವಿವಿಧ ಹವ್ಯಾಸಿ ಸ್ಥಳೀಯ ಪಂಗಡ ಗಳಿಂದ ವಿವಿದ ವಿನೋದಾವಳಿಗಳು ಪ್ರಸ್ತುತಿಗೊಂಡವುಬಲೆ ತೆಲಿಪಾಲೆ ಖ್ಯಾತಿಯ ವ್ರತ್ತಿಪರ ಕಲಾತಂಡತೆಲಿಕೆದ ತೆನಾಲಿ ಕಾರ್ಕಳಇವರಿಂದ ಎರಡು ಘಂಟೆಗಳ  ನಿರಂತರತೆಲಿಕೆದ ಬರ್ಸಹಾಸ್ಯ ಕಾರ್ಯಕ್ರಮ ನಡೆಯಿತು. ವರ್ಕಾಡಿಯಲ್ಲಿ ಹಿಂದೆ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದು ಈಗ ದೇಲಂತಬೆಟ್ಟು ಧರ್ಮಗುರುಗಳಾಗಿರುವ ವಂದನೀಯ ಸ್ವಾಮಿ ಪೀಟರ್ ಸೆರಾವೊ ಮುಖ್ಯ ಅಥಿತಿಗಳಾಗಿ ಎಲ್ಲರೂ ಒಂದಾಗಿ ಬಾಳಲು ಕರೆ ನೀಡಿದರು. ಸ್ಥಳೀಯ ಧ್ರಮಗುರುಗಳಾದ ವಂದನೀಯ ಸ್ವಾಮಿ ಫ್ರಾನ್ಸಿಸ್ ರೊಡ್ರಿಗಸ್ ಇವರು ಆದ್ಯಕ್ಶ ಸ್ಥಾನ ವಹಿಸಿ ಶುಭಹಾರೈಸಿದರು. ಕಥೊಲಿಕ್ ಸಭಾ ವರ್ಕಾಡಿ ಘಟಕಾದ್ಯಕ್ಶ ರೋಬಿನ್ ಡಿಸೋಜಾ ಸ್ವಾಗತಿಸಿ, ಕಥೊಲಿಕ್ ಸಭಾ ಕಾರ್ಯದರ್ಶಿ ಐವನ್ ಡಿಸೋಜಾ ವಾರ್ಷಿಕ ವರದಿಯನ್ನು ವಾಚಿಸಿದರು. ರೋಶನ್ ಡಿಸೋಜಾ ಧನ್ಯವಾದ ಸಮರ್ಪಿಸಿ, ಕು| ಸುಷ್ಮಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರಿನ ಕಾಪುಚಿನ್ ಯಾಜಕರಾದ  ವಂದನೀಯ ಸ್ವಾಮಿ ಫ್ರೆಡ್ರಿಕ್ ರೊಡ್ರಿಗಸ್, ಬೋಳ ಧರ್ಮಗುರುಗಳಾದ ವಂದನೀಯ ಸ್ವಾಮಿ ಮೈಕಲ್ ಡಿಸೋಜಾ, ಬ್ರದರ್ ಪ್ರೇಮ್ಜಿತ್ ಮಾರ್ಟಿಸ್, ಕೊನ್ವೆಂಟ್ಗಳ ಮುಕ್ಯಸ್ತರಾದ ಸಿಸ್ಟರ್ ಜೆರೋಜಾ ಫೆರ್ನಾಂಡಿಸ್ ಮತ್ತು ಸಿಸ್ಟರ್ ಸಿಂತಿಯಾ ಸಿಕ್ವ್ವೆರಾ, ಚರ್ಚ್ ಪಾಲನಾ ಸಮಿತಿಯ ಉಪಾದ್ಯಕ್ಶರಾದ ರೋನಿ ಡಿಸೋಜಾ, ಕಾರ್ಯದರ್ಶಿಗಳಾದ ಜಯಪ್ರಕಾಶ್ ಡಿಸೋಜಾ ಮತ್ತು ಇತರರು ಹಾಜರಿದ್ದರು.

 

ವಂದನೀಯ ಸ್ವಾಮಿ ಲೊರೆನ್ಸ್ ಮಾರ್ಟಿಸ್ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಪುಣ್ಯಕ್ಷೇತ್ರವನ್ನು 1992 ಮಾರ್ಚ್ 1 ರಂದು ಆರಂಭಿಸಲಾಗಿತ್ತು. ವೆಲಂಕಣಿಯಿಂದಲೇ ತರಿಸಿದ ಮಾತೆಯ ವಿಗ್ರಹವನ್ನು ಭವ್ಯ ಮೆರವಣಿಗೆಯಲ್ಲಿ ತಂದು ಚರ್ಚ್ನಲ್ಲಿ ಸ್ಥಾಪಿಸಲಾಗಿತ್ತುಅಂದಿನಿಂದ ಇಂದಿನವರೆಗೆ ಪ್ರತಿ ಶನಿವಾರ ಬಲಿ ಪೂಜೆಯೊಂದಿಗೆ ಜಪಸರ ಪ್ರಾಥòನೆ ನಡೆಯುತ್ತಾ ಬಂದಿದೆ. ವರ್ಕಾಡಿ ಜನತೆಯ ಮಾತ್ರವಲ್ಲ ಊರ ಪರವೂರ ಭಕ್ತಾದಿಗಳೆಲ್ಲರ ಮೇಲೆ ಅವರ ಸಹಾಯ ಹಸ್ತ ಹಾಗೂ ಕೃಪಾಕಟಾಕ್ಷವು ನಿರಂತರವಾಗಿದ್ದು, ತಾಯಿಯಾಗಿ ನಮ್ಮೆಲ್ಲರನ್ನು ಅಂದಿನಿಂದ ಇಂದಿನವರಗೆ ಕಾಪಾಡಿ ಸಲಹಿದ್ದಾರೆ

View Photo Album 

http://vorkadychurch.com/photos/valankan-mai-feast-2018