27ನೇ ವರ್ಷದ ವೆಲಂಕಣಿ ಆರೋಗ್ಯಮಾತೆಯ ವಾರ್ಷಿಕ ಮಹೋತ್ಸವ

Organized by : PARISH COUNCIL

ಯೇಸು ಕ್ರಿಸ್ತರ ತಿರು ಹೃದಯದ ದೇವಾಲಯ, ವರ್ಕಾಡಿ

27ನೇ ವರ್ಷದ ವೆಲಂಕಣಿ ಆರೋಗ್ಯಮಾತೆಯ ವಾರ್ಷಿಕ ಮಹೋತ್ಸವ

          ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ 1910ರಲ್ಲಿ ಸ್ಥಾಪಿಸಲ್ಪಟ್ಟ, ಯೇಸು ಕ್ರಿಸ್ರರ ತಿರುಹøದಯಕ್ಕೆ ಸಮರ್ಪಿಸಲಾದ ವರ್ಕಾಡಿ ದೇವಾಲಯದಲ್ಲಿ ಆರೋಗ್ಯಮಾತೆ (ವೆಲಂಕಣಿ) ಪುಣ್ಯಕ್ಷೇತ್ರದ 27ನೇ ವರ್ಷದ ವಾರ್ಷಿಕ ಮಹೋತ್ಸವವು ಇದೇ ಫೆಬ್ರವರಿ 11   ಆದಿತ್ಯವಾರದಂದು ವಿಜೃಂಭಣೆಯಿಂದ ಜರಗಲಿರುವುದು.

ದಿನದ ಕಾರ್ಯಕ್ರಮವು ಬೆಳಿಗ್ಗೆ 10 ಘಂಟೆಗೆ, ದಾನಿಗಳಿಗೆ ಮೊಂಬತ್ತಿ ವಿತರಣೆಯ ನಮನದೊಂದಿಗೆ ಆರಂಭವಾಗಲಿದೆ. ಬಳಿಕ ಬೆಳಿಗ್ಗೆ 10.30 ಘಂಟೆಗೆ ನಡೆಯುವ ಸಂಬ್ರಮದ ಬಲಿಪೂಜೆಯ ನೇತೃತ್ವವನ್ನು ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಶೇತ್ರದ ನಿರ್ದೇಶಕರಾದ ವಂದನೀಯ ಸ್ವಾಮಿ ಬೆಂಜಮಿನ್ ಪಿಂಟೊ ಇವರು ವಹಿಸಲಿರುವರು. ಮಂಗಳೂರು ಜೆಪ್ಪು ಸಂತ ಜೋಸೆಫ್ ಗುರುಕುಲದ ಆದ್ಯಾತ್ಮಿಕ ನಿರ್ದೇಶಕರಾದ ವಂದನೀಯ ಸ್ವಾಮಿ ಬೊನಿಫಾಸ್ ಪಿಂಟೊ ಇವರು ಅಂದಿನ ವಿಶೇಷ ಪ್ರವಚನ ಗೈಯುವರು. ಧರ್ಮಗುರುಗಳು ಪ್ರತ್ಯೇಕ ಪ್ರಾರ್ಥನೆಯೊಂದಿಗೆ ರೋಗಿಗಳಿಗೆ ಆಶೀರ್ವಾದವನ್ನು ನೀಡಲಿರುವರು. ಪೂಜಾವಿಧಿಗಳ ಮುಕ್ತಾಯದ ನಂತರ ನೆರೆದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆ   ಇರುವುದು.

 

ಪ್ರಯುಕ್ತ ಅದೇ ದಿನ ಸಂಜೆ 6.30ಕ್ಕೆ ವರ್ಕಾಡಿ ಚರ್ಚ್ ವಠಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಜರಗಲಿರುವುದು. ಬಲೆ ತೆಲಿಪಾಲೆ ಖ್ಯಾತಿಯ ವ್ರತ್ತಿಪರ ಕಲಾತಂಡತೆಲಿಕೆದ ತೆನಾಲಿ ಕಾರ್ಕಳಇವರಿಂದತೆಲಿಕೆದ ಬರ್ಸಹಾಸ್ಯ ಕಾರ್ಯಕ್ರಮ ನಡೆಯಲಿರುವುದು.

 

ವಂದನೀಯ ಸ್ವಾಮಿ ಲೊರೆನ್ಸ್ ಮಾರ್ಟಿಸ್ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಪುಣ್ಯಕ್ಷೇತ್ರವನ್ನು 1992 ಮಾರ್ಚ್ 1 ರಂದು ಆರಂಭಿಸಲಾಗಿತ್ತು. ವೆಲಂಕಣಿಯಿಂದಲೇ ತರಿಸಿದ ಮಾತೆಯ ವಿಗ್ರಹವನ್ನು ಭವ್ಯ ಮೆರವಣಿಗೆಯಲ್ಲಿ ತಂದು ಚರ್ಚ್ನಲ್ಲಿ ಸ್ಥಾಪಿಸಲಾಗಿತ್ತುಅಂದಿನಿಂದ ಇಂದಿನವರೆಗೆ ಪ್ರತಿ ಶನಿವಾರ ಬಲಿ ಪೂಜೆಯೊಂದಿಗೆ ಜಪಸರ ಪ್ರಾಥòನೆ ನಡೆಯುತ್ತಾ ಬಂದಿದೆ. ವರ್ಕಾಡಿ ಜನತೆಯ ಮಾತ್ರವಲ್ಲ ಊರ ಪರವೂರ ಭಕ್ತಾದಿಗಳೆಲ್ಲರ ಮೇಲೆ ಅವರ ಸಹಾಯ ಹಸ್ತ ಹಾಗೂ ಕೃಪಾಕಟಾಕ್ಷವು ನಿರಂತರವಾಗಿದ್ದು, ತಾಯಿಯಾಗಿ ನಮ್ಮೆಲ್ಲರನ್ನು ಅಂದಿನಿಂದ ಇಂದಿನವರಗೆ ಕಾಪಾಡಿ ಸಲಹಿದ್ದಾರೆ

 

© www.vorkadychurch.com All rights reserved

Facebook

Twitter

Google+

Youtube