ವರ್ಕಾಡಿ ಇಗರ್ಜಿಯಲ್ಲಿ ನವೆಂಬರ್ 24 ರಂದು ರವಿವಾರ ಇಗರ್ಜಿಯ ವಾರ್ಷಿಕ ಕ್ರಿಸ್ತ ಪ್ರಸಾದ ಮೆರವಣಿಗೆ ಹಾಗೂ ಸಭಾ ಐಕ್ಯತೆಯ ದಿನವನ್ನು ಆಚರಿಸಲಾಯಿತು.
ಫಾದರ್ ಮುಲ್ಲರ್ ಸಮೂಹ ಸಂಸ್ತೆಗಳ ನಿಯೋಜಿತ ನಿರ್ದೇಶಕರಾದ ವಂದನೀಯ ಫಾವುಸ್ತಿನ್ ಲೋಬೊರವರು ಪ್ರಧಾನ ಗುರುಗಳಾಗಿ ಬಲಿಪೂಜೆ ಪ್ರಾರ್ಥನೆಗಳನ್ನು ನಡೆಸಿ ಕೊಟ್ಟರು.ಸಹೋದರ ಬಾಂಧವ್ಯ ಸಂದೇಶವನ್ನು ಬಯ್ಬಲ್ ಉಲ್ಲೇಖಗಳ ಮೂಲಕ ಒತ್ತಿ ಹೇಳಿದರು.ಇಗರ್ಜಿ ಮುಖ್ಯ ಗುರುಗಳಾದ ಸ್ವಾಮಿ ಬಾಸಿಲ್ ವಾಸ್ ರವರು ಇಡೀ ಕಾರ್ಯಕ್ರಮ ನಡೆಸಿ ಕೊಟ್ಟರು.ಸಹಾಯಕ ಗುರುಗಳಾದ ವ। ಸಂತೋಷ್ ಡಿಸೋಜ ಹಾಗೂ ಪಾವೂರಿನ ವ। ಡೋಲ್ಫಿ ಸಿಕ್ವೇರರವರು ಸಕಲ ಸಹಾಯ ನೀಡಿದರು. ಉಪಾದ್ಯಕ್ಷರಾದ ರಾಜೇಶ್ ಡಿ ಸೋಜ ಹಾಗೂ ಪಾಲನಾ ಸಮಿತಿ ಸದಸ್ಯರು ಸರ್ವ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುವಂತೆ ಮಾಡಿದರು. ಪವಿತ್ರ ಕ್ರಿಸ್ತ ಪ್ರಸಾದ ಮೆರವಣಿಗೆ ಮಾಡಿ ಊರಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.
ಕಾಳ್ಜಾಚೊ ಉಮಾಳೊ ಎಂಬ ಸ್ಮರಣ ಸಂಚಿಕೆಯನ್ನು ಕೂಡ ಇದೇ ಸಮಯ ಬಿಡುಗಡೆ ಮಾಡಲಾಯಿತು.