ಸೌಹಾರ್ದವೇ ಶಾಂತಿಗೆ ದಾರಿ ಶಾಂತಿ ಬೇಕೆಂದಾದರೆ ಸೌಹಾರ್ದ ಆಥವಾ ಬಂದುತ್ವ ಅತ್ಗಗತ್ಯ ಎಂದು ಅತೀ ವಂದನೀಯ ಸ್ವಾಮಿ ಬಾಸಿಲ್ ವಾಸ್ ರವರು ವರ್ಕಾಡಿಯಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದಕೂಟ ಹಾಗೂ ಸೌಹಾರ್ದ ಕ್ರಿಕೆಟ್ ಸಭಾ ಕಾರ್ಯಕ್ರಮದ ಅದ್ಯಕ್ಷ ಸ್ಥಾನದಿಂದ ಹೇಳಿದರು.

ಇತ್ತೀಚೆಗೆ ಈ ಕಾರ್ಯಕ್ರಮ ವರ್ಕಾಡಿಯಲ್ಲಿ ವರ್ಕಾಡಿ ಇಗರ್ಜಿ ,ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಕಳಿಯೂರು, ಕಾಪೇರಿ ಎಯುಪಿ ಶಾಲೆ,ಸೈಂಟ್ ಮೇರಿಸ್ ಸಿಬಿಎಸ್ ಸಿ ಶಾಲೆ ಮತ್ತು ಅಂತರ ಧರ್ಮೀಯ ಅಯೋಗ ವರ್ಕಾಡಿ ಇಗರ್ಜಿಇವುಗಳ ಜಂಟಿ ಆಶ್ರಯದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಣೆಗೈದ ಮಂಗಳೂರು ವಿಶ್ವ ವಿದ್ಯಾಲಯದ ಕ್ರೈಸ್ತವಿದ್ಯಾಪೀಠದ ಮುಖ್ಯಸ್ಥರಾದ ವಂದನೀಯ ಐವನ್ ಡಿಸೋಜರು ಸಹೋದರ ಎಂಬ ಪದವನ್ನು ವಿವರಿಸುತ್ತಾ ಸೌಹಾರ್ದ ಎಂದರೆ ಎಲ್ಲರನ್ನೂ ಸಹೋದರ ಸಹೋದರಿಯರಂತೆ ಗುರುತಿಸುವುದದು.ಇಂತಹ ಭ್ರಾತ್ವದ ಸಮಾಜ ಕಟ್ಟುವ ಎಂದರು.ಆತಿಥಿಗಳಾದ ಕ.ಸಾ.ಪ. ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷರಾದ ಡಾ.ಜಯಪ್ರಕಾಶ ತೊಟ್ಟೆತೋಡಿ ಯವರು ಸೌಹಾರ್ದದಿಂದ ಎಲ್ಲರನ್ನೂ ಒಳಗೊಂಡ ಭರತದ ಮಕ್ಕಳಾಗೋಣ ಎಂದರು.

ಅತಿಥಿಗಳಾಗಿ ಆಗಮಿಸಿದ ಬಂಟ್ವಾಳದ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರೂ ಲೇಖಕರೂ ಆದ ರಜಾಕ್ ಅನಂತಾಡಿಯವರು ಕ್ರೈಸ್ತ ಧರ್ಮದ ಸೇವೆ, ಶಿಕ್ಷಣ ನಿಜವಾದ ಶಾಂತಿ ಸೌಹರ್ದದ ಸಮಾಜ ಕಟ್ಟಲು ಉಪಯುಕ್ತ ಅಂದರು.ಕರ್ನಾಟಕದ ಸರಕಾರದ ಗಡಿಪ್ರದೇಶ ಅಭಿವ್ರದ್ಧಿ ಪ್ರಾಧಿಕಾರದ ಸದಸ್ಯರಾದ ಎಸ್ ಆರ್ ಸುಬ್ಬಯ್ಯಕಟ್ಟೆಯವರು ಈ ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲರನ್ನು ಅಭಿನಂದಿಸಿದರು.ಷಹಾಯಕ ಗುರುಗಳಾದ ವ.ಸಂತೋಷ್ ಡಿ ಸೋಜ ,ಪಾಲನಾ ಪರಿಷತ್ ಉಪಾದ್ಯಕ್ಷರಾದ ರಾಜೇಶ್ ಡಿ ಸೋಜ , ಎರಡೂ ಕಾನ್ವಂಟ್ಗಳ ಮುಖ್ಯಸ್ಥರಾದ ಸಿ. ಶಾಂತಿ ಹಾಗೂ ಸಿ.ಮೊಂತಿನ್ ಗೋಮ್ಸ್,ಕಥೋಲಿಕ ಸಭೆ ಅಧ್ಯಕ್ಷರಾದ ಅಶೋಕ್ ಡಿ ಸೋಜ, ಸೌಹಾರ್ಧ ಸಮಿತಿ ಅದ್ಯಕ್ಷ ಯೇಸು ಪ್ರಸಾದ್ , ಕಳುಯೂರು ಮತ್ತು ಕಾಪೀರಿ ಶಾಲೆಗಳ ಮುಖ್ಯೋಪಾ ಧ್ಯಾಯರು ವೇದಿಕೆ ಯಲ್ಲಿದ್ದರು. ಕಾರ್ಯದರ್ಶಿಯಾದ ಸಂದ್ಯಾ ಡಿಸೋಜ ಸ್ವಾಗತಿಸಿ ಅನಿತಾ ಡಿಸೋಜ ವಂದಿಸಿದರು.
ತದನಂತರ ಸೌಹರ್ಧ ಕ್ರಿಕೆಟ್ ಮ್ಯಾಚ್ಗಳು ನಡೆದವು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Last Sunday 8.12.24Bandhuthva Christmas program was held at Vorkady followed by Sowharda Christmas

The program was presided over by Fr Basil Vas . Rev Dr Ivan DSouza , the head of Chair in Christianity inaugurated the program with his message for bandhuthva. Dr Jaya Prakash , president of Kannada Sahithya perishad of Kasaragod district,Mr Razak Ananthadi , lecturer of Bantwal Govt junior college , Mr ARSubbayyakatte member of Karnataka border development board were the chief guests. Fr Basil Vas called for harmony which alone can build a peaceful community. As a sign of unity all the leaders together cut the cake and shared with all. The program was followed by day long cricket matches , each team comprised of Christian , Hindu and Muslim players.

Home | News | Sitemap | Contact

Copyright © 2023 Sacred Heart of Jesus Church, Vorkady

All rights reserved. Powered by eCreators

Sacred Heart of Jesus Church Vorkady
Manjeshwar (VIA)
Kasaragod District
671323 (Kerala)

PH: 04998-293408
Mobile: +91 82779 39426